== ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ == ಗಜೇಶ ಮಸಣಯ್ಯ ಅಕಲಕೋಟೆ ತಾಲ್ಲೋಕಿನ ಕಂಜಿಗೆ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯೇ ಈ ಗೌಪ್ಯವಚನಕಾರ್ತಿ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಈಕೆಯ ೯ವಚನಗಳು ಹಸ್ತಪ್ರತಿಯಲ್ಲಿ ಲಭ್ಯವಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಈಕೆಯ ವಚನಗಳ ಅಂಕಿತ " ಮಸಣಯ್ಯ ಗಜೇಶಪ್ರಿಯ".